ಅಸಂಘಟಿತ ಪುರೋಹಿತರು ಮತ್ತು ಅಡುಗೆ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಲು ಡಿ.ಕೆ. ಶಿವಕುಮಾರ್ ಅವರಿಗೆ ಮನವಿ

ಬೆಂಗಳೂರು: ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ (R) ವತಿಯಿಂದ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಅಸಂಘಟಿತ ಧಾರ್ಮಿಕ ವೃತ್ತಿಪರರು ಹಾಗೂ ಅಡುಗೆ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸುವಂತೆ ಆಗ್ರಹಿಸಲಾಗಿದೆ.

ಅಸಂಘಟಿತ ಪುರೋಹಿತರು ಮತ್ತು ಅಡುಗೆ ಕಾರ್ಮಿಕರಿಗೆ ಲೇಬರ್ ಕಾರ್ಡ್ ಹಾಗೂ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ಸೌಲಭ್ಯಗಳನ್ನು ಕಲ್ಪಿಸಿರುವ ಕರ್ನಾಟಕ ಸರ್ಕಾರದ ಕ್ರಮಕ್ಕೆ ಫೆಡರೇಶನ್ ಕೃತಜ್ಞತೆ ಸಲ್ಲಿಸಿದೆ. ಜೊತೆಗೆ, ಕರ್ನಾಟಕ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಫೆಡರೇಶನ್ ಪ್ರತಿನಿಧಿಗಳಾದ ಇಬ್ಬರಿಗೆ ನಿರ್ದೇಶಕರಾಗಿ ಅವಕಾಶ ಕಲ್ಪಿಸುವಂತೆಯೂ ಮನವಿ ಮಾಡಲಾಗಿದೆ.

ಫೆಡರೇಶನ್ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಡಾ. ಎಂ.ಬಿ. ಅನಂತಮೂರ್ತಿ ಸೇರಿದಂತೆ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳು ಈ ಮನವಿಗೆ ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯದಾದ್ಯಂತ ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುರೋಹಿತರು, ಅಡುಗೆ ಕಾರ್ಮಿಕರು, ಯುವಕರು ಹಾಗೂ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ಸರ್ಕಾರ ಮತ್ತಷ್ಟು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

ಸ್ಥಳ: ಬೆಂಗಳೂರು

ಇಂದ,
ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು,
ಡಾ. ಎಂ.ಬಿ. ಅನಂತಮೂರ್ತಿ,
ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ (R)

ಇವರಿಗೆ,
ಮಾನ್ಯ ಗೌರವಾನ್ವಿತ ಶ್ರೀ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್ (ಡಿ.ಕೆ. ಶಿವಕುಮಾರ್) ರವರು,
ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ,
ವಿಧಾನಸೌಧ, ಬೆಂಗಳೂರು.

ವಿಷಯ: ಅಸಂಘಟಿತ ಧಾರ್ಮಿಕ ವೃತ್ತಿಪರರು ಮತ್ತು ಅಡುಗೆ ಕಾರ್ಮಿಕರಿಗೆ ಲೇಬರ್ ಕಾರ್ಡ್ ಮತ್ತು ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಕಾರ್ಡ್ ವಿತರಿಸಿದ್ದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿ, ಪ್ರತ್ಯೇಕ ಮಂಡಳಿ ರಚನೆ ಮತ್ತು ನಿರ್ದೇಶಕರ ನೇಮಕ ಕುರಿತು ಮನವಿ.

ಮಾನ್ಯ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್ ರವರೇ,

ಸವಿನಯ ನಮಸ್ಕಾರಗಳೊಂದಿಗೆ,

1. ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು: ಕರ್ನಾಟಕ ಸರ್ಕಾರವು ನಮ್ಮಂತಹ ಅಸಂಘಟಿತ ಧಾರ್ಮಿಕ ವೃತ್ತಿಪರರು (ಪುರೋಹಿತರು) ಮತ್ತು ಅಡುಗೆ ಕಾರ್ಮಿಕರಿಗೆ ಲೇಬರ್ ಕಾರ್ಡ್ ವಿತರಿಸಿರುವ ಕ್ರಾಂತಿಕಾರಿ ನಿರ್ಧಾರಕ್ಕೆ ಮತ್ತು ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ಕಾರ್ಡ್ ನೀಡಿ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸಿರುವುದಕ್ಕೆ ನಮ್ಮ ಸಂಸ್ಥೆಯ ಪರವಾಗಿ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

2. ನಮ್ಮ ಬೇಡಿಕೆಯ ಮುಖ್ಯ ಅಂಶಗಳು:

   ಅ) ಪ್ರತ್ಯೇಕ ಮಂಡಳಿ ರಚನೆ: ಅಸಂಘಟಿತ ಪುರೋಹಿತರು ಮತ್ತು ಅಡುಗೆ ಕಾರ್ಮಿಕರ ಕಲ್ಯಾಣಕ್ಕಾಗಿ ಕರ್ನಾಟಕದಲ್ಲಿ ಪ್ರತ್ಯೇಕ ಕಲ್ಯಾಣ ಮಂಡಳಿಯನ್ನು (Separate Welfare Board) ರಚಿಸಿ ಸರ್ಕಾರಿ ಆದೇಶ ಹೊರಡಿಸಬೇಕಾಗಿ ವಿನಂತಿ.

   ಬ) ಇಬ್ಬರು ನಿರ್ದೇಶಕರ ನೇಮಕ: ಅಸ್ತಿತ್ವದಲ್ಲಿರುವ ಕರ್ನಾಟಕ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ನಮ್ಮ ಫೆಡರೇಶನ್‌ನಿಂದ ಇಬ್ಬರು ಜನರನ್ನು ನಿರ್ದೇಶಕರಾಗಿ (Directors) ನೇಮಕ ಮಾಡಲು ಅವಕಾಶ ನೀಡಬೇಕು.

   ಕ) ಹಿಂದಿನ ಪತ್ರದ ಹಿಂಬರಹ: ಈ ಕುರಿತು ನಾವು ಈಗಾಗಲೇ ಮಂಡಳಿಗೆ ಮನವಿ ಪತ್ರ ಸಲ್ಲಿಸಿದ್ದು, ಅದಕ್ಕೆ ಸರ್ಕಾರದಿಂದ ಹಿಂಬರಹ (Endorsement) ಕೂಡ ಬಂದಿರುತ್ತದೆ.

3. ನಮ್ಮ ಸಂಸ್ಥೆಯ ಬಲ: ಕರ್ನಾಟಕ ರಾಜ್ಯದಾದ್ಯಂತ ಸುಮಾರು 67 ಲಕ್ಷ ಅಸಂಘಟಿತ ಪುರೋಹಿತರು, ಅಡುಗೆ ಕಾರ್ಮಿಕರು, ಯುವಕರು ಮತ್ತು ಮಹಿಳೆಯರು ನಮ್ಮ ಫೆಡರೇಶನ್‌ನ ಸದಸ್ಯರಾಗಿದ್ದಾರೆ.

ಆದ್ದರಿಂದ ತಾವು ದಯಮಾಡಿ ಈ ಎಲ್ಲಾ ವೃತ್ತಿಪರರಿಗೂ ಒಂದು ಅನುಕೂಲ ಮಾಡಿಕೊಡಬೇಕಾಗಿ ತಮ್ಮಲ್ಲಿ ಕಳಕಳಿಯ ವಿನಂತಿ.

ತಮ್ಮ ವಿಶ್ವಾಸಿ,
ಡಾ. ಎಂ.ಬಿ. ಅನಂತಮೂರ್ತಿ
ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು


ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು - ಡಾಕ್ಟರ್ ಬಿ ಎನ್ ಮಹೇಶ್ ಕುಮಾರ್ 
 
ರಾಷ್ಟ್ರೀಯ ಯುವ ಅಧ್ಯಕ್ಷರು - ಶಶಾಂಕ್ ಶರ್ಮ ಬಿ 
 
ರಾಷ್ಟ್ರೀಯ ಮಹಿಳಾ ಅಧ್ಯಕ್ಷರು -  ಶ್ರೀಮತಿ ಜಯಶ್ರೀ ಕಣ್ಣೂರ್ 

 ಕರ್ನಾಟಕ ರಾಜ್ಯದ್ಯಕ್ಷರು -  ಶ್ರೀ  ವೇಣುಗೋಪಾಲ್ K. S.

ರಾಷ್ಟ್ರೀಯ ಕಾರ್ಯದರ್ಶಿಗಳು - ಡಾ ಶ್ರೀ ಮಂಜುನಾಥ ಭಟ್ 

 ರಾಷ್ಟ್ರೀಯ ಮಹಿಳಾ ಉಪಾಧ್ಯಕ್ಷರು - ಶ್ರೀಮತಿ ಸುವರ್ಣ ಸುನಿಲ್ ಕುಲಕರ್ಣಿ

ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ (R)

Edited By: Nagabhushan M

खबरें और भी हैं

ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ವಿಶೇಷ ಮನವಿ

ಪ್ರಮುಖ ಸುದ್ದಿಗಳು

ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ವಿಶೇಷ ಮನವಿ

      ಇಂದ,ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು,ಡಾ. ಎಂ.ಬಿ. ಅನಂತಮೂರ್ತಿ,ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್(R) ಇವರಿಗೆ,ಮಾನ್ಯ ಗೌರವಾನ್ವಿತ ಶ್ರೀ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್...
ಜಿಲ್ಲೆ 
ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ವಿಶೇಷ ಮನವಿ

ಅಸಂಘಟಿತ ಪುರೋಹಿತರು ಮತ್ತು ಅಡುಗೆ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಲು ಡಿ.ಕೆ. ಶಿವಕುಮಾರ್ ಅವರಿಗೆ ಮನವಿ

ಬೆಂಗಳೂರು: ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ (R) ವತಿಯಿಂದ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಅಸಂಘಟಿತ ಧಾರ್ಮಿಕ ವೃತ್ತಿಪರರು ಹಾಗೂ...
State 
ಅಸಂಘಟಿತ ಪುರೋಹಿತರು ಮತ್ತು ಅಡುಗೆ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಲು ಡಿ.ಕೆ. ಶಿವಕುಮಾರ್ ಅವರಿಗೆ ಮನವಿ

ಮೈಸೂರು ದಸರಾ ಮಹೋತ್ಸವದಲ್ಲಿ ಅದ್ದೂರಿ ಜಂಬೂಸವಾರಿ

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆದ ಜಂಬೂಸವಾರಿ ಕಾರ್ಯಕ್ರಮ ವೈಭಮೊಪೇತವಾಗಿ ನಡೆಯಿತು. ಮೈಸೂರು ಅರಮನೆಯಿಂದ ಹೊರಟ ಜಂಬೂಸವಾರಿ ನೋಡಲು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಲಕ್ಷಾಂತರ ಜನರು...
Education 
ಮೈಸೂರು ದಸರಾ ಮಹೋತ್ಸವದಲ್ಲಿ ಅದ್ದೂರಿ ಜಂಬೂಸವಾರಿ

MHT CET PCB 2025: 14 Hit 100!

The Maharashtra State Common Entrance Test (MHT CET) Cell has officially announced the MHT CET 2025 results for the PCB...
Education 
MHT CET PCB 2025: 14 Hit 100!